ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಬಡವರಿಗೊಂದು, ದುಡ್ಡಿದ್ದವರಿಗೊಂದು ನ್ಯಾಯ ಮಾಡಲಾಗುತ್ತಿದೆ. ಜೂನ್ 3 ರಂದು ಶಿವರತ್ನ ಪ್ಯಾಲೇಸ್ ನಲ್ಲಿ ನನ್ನ ಪತಿ ಆರ್ಸಿಬಿ ಪಂದ್ಯ ನೋಡಲು ತೆರಳಿದ್ದಾರೆ. ಈ ವೇಳೆ ಗಲಾಟೆ ನಡೆದು ನನ್ನ ಗಂಡನ ವಿರುದ್ಧ ಸುಳ್ಳು ಜಾತಿ ನಿಂದನೆ ಆರೋಪ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ. ಆದರೆ, ಮಂಜುನಾಥ್ ಮುಳುಗುಂದ ಸೇರಿದಂತೆ ಹಲವರ ವಿರುದ್ಧ ದೂರು ನೀಡಿದರೂ ಅವರನ್ನು ಇನ್ನೂ ಬಂಧಿಸಿಲ್ಲ. ನಮ್ಮ ಮನೆಗೂ ಬಂದು ನನಗೆ ಆವಾಚ ಶಬ್ದಗಳಿಂದ ಬೈದಿದ್ದಾರೆ ಅಂತ ನೊಂದ ಮಹಿಳೆ ಪೊಲೀಸರ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.