ಗಣೇಶ ಉತ್ಸವ ಸಂದರ್ಭದಲ್ಲಿ ಶಾಂತಿ ಕದಡಲು ಯತ್ನಿಸಿದ ಸಾಮಾಜಿಕ ಜಾಲತಾಣದ ಮೇಲೆ ವಿಜಯಪುರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ "ವಿಜಯಪುರ ಚಾ ಮುಸ್ಲಿಂ" ಎನ್ನುವ ಪೇಜ್ ನಲ್ಲಿ ವಿಡಿಯೋ ಹರಿಬಿಟ್ಟು ಶಾಂತಿ ಕದಡುವ ಯತ್ನಾಗಲಿದ್ದ ಕಿಡಿಗೇಡಿ ಪೇಜ್ ವಿರುದ್ಧ ವಿಜಯಪುರ ನಗರ ಗೋಲ್ ಗುಮ್ಮಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ಪೊಲೀಸ್ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಶಾಂತಿ ಕದಡುವ ಈ ಘಟನೆ ಕುರಿತು ಈಗಾಗಲೇ ಸುಮೊಟೊ ಕೇಸ್ ದಾಖಲಿಸಿದ್ದೇವೆ ಎಂದು ವಿಜಯಪುರದಲ್ಲಿ ಶುಕ್ರವಾರ ಸಾಯಂಕಾಲ 5ಗಂಟೆ ಸುಮಾರಿಗೆ ಪತ್ರಿಕಾ ಪ್ರಕಟಣೆ ಮೂಲಕ ಹೇಳಿದರು.