ನೌಕರರ ಸಂಬಳ ನೀಡುವಂತೆ ಆಗ್ರಹಿಸಿ ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿಯ ಎದುರು ಪ್ರಭಂಜನ್ ಗಾರ್ಮೆಂಟ್ಸ್‌ನ ನೌಕರರು ಸೋಮವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಪ್ರತಿಭಟನೆ ನಡೆಸಿದರು. ಪ್ರಭಂಜನ್ ಗಾರ್ಮೆಂಟ್ಸ್‌ನ ನೌಕರರಿಗೆ ಕಳೆದ ಐದು ತಿಂಗಳಿಂದ ಮಾಲೀಕರಾದ ಕ್ರಾಂತಿಕಿರಣ ಚೌಡಪ್ಪ, ರಾಘವೇಂದ್ರ ಮೇಲಗಿರಿ ಐದು ತಿಂಗಳ ವೇತನ, ಇಎಸ್‌ಐ, ಪಿಎಫ್ ನೀಡದೆ ಗಾರ್ಮೆಂಟ್ಸ್‌ಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ ಎಂದು ನೌಕರರು ಆರೋಪಿಸಿದರು. ಅಲ್ಲದೇ, 1 ಕೋಟಿ 5 ಲಕ್ಷ ಹಣ ಬಾಕಿ ಇದ್ದು, ಅದರಲ್ಲಿ 17 ಲಕ್ಷ ಹಣ ನೀಡಿದ್ದಾರೆ. ಆದ್ರೇ, ಉಳಿದ 85 ಲಕ್ಷ ಹಣ ಇಲ್ಲಿಯವರೆಗೂ ನೀಡಿಲ್ಲ ಎಂದು ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ನೌಕರರ ವೇತನ ಒದಗಿಸಬೇಕು ಎಂದರು.