ಕಲ್ಬುರ್ಗಿಯ ಬಸವೇಶ್ವರ ಕಾಲೋನಿ ಯಿಂದ ಕಂಪ್ಯೂಟರ್ ಸೆಂಟರ್‌ಗೆ ಮಾರ್ಕ್ಸ್ ಕಾರ್ಡ್ ತಗೆದುಕೊಂಡು ಬರುವದಾಗಿ ಮನೆಯಿಂದ ಹೋದ 30 ವಯಸ್ಸಿನ ಪಲ್ಲವಿ ಕಾಂಬಳೆ ಎಂಬ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ರಾತ್ರಿಯಾದರೂ ಮನೆಗೆ ವಾಪಸ್ಸು ಬರದೇ ಇದ್ದಾಗ ಕುಟುಂಬಸ್ಥರು ಎಲ್ಲಡೆ ಹುಡುಕಾಡಿದ್ದಾರೆ. ಯಾವುದೇ ಸುಳಿವು ಸಿಕ್ಕಿಲ್ಲ. ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಎಂಬಿ.ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.116/2025 ಅಡಿ ಮಹಿಳೆ ಕಾಣೆ ಪ್ರಕರಣ ದಾಖಲು ಮಾಡಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಶೆನಿವಾರ 9 ಗಂಟೆಗೆ ಪೊಲೀಸರು ತಿಳಿಸಿದ್ದಾರೆ....