ಮದ್ದೂರಿನಲ್ಲಿ ಸಾಮೂಹಿಕ ಗಣೇಶ ಮೆರವಣಿಗೆ ಹಾಗು ವಿಸರ್ಜನೆ ವಿಚಾರವಾಗಿ ಬುಧವಾರ ಮಧ್ಯಾಹ್ನ 12:30ರ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಈಗಾಗಲೇ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ನಾನು ಊರಿನಲ್ಲಿ ಇರಲಿಲ್ಲ, ನನಗೆ ಪೂರ್ಣ ಮಾಹಿತಿ ಗೊತ್ತಿಲ್ಲ. ನಾನು ಕೂಡ ಅವರ ಹೇಳಿಕೆಗಳನ್ನು ಪೇಪರ್ ನಲ್ಲಿ ಗಮನಿಸಿದ್ದೇನೆ. ಅದರ ಬಗ್ಗೆ ತಿಳಿಯದೆ ಮಾತನಾಡಲು ಹೋಗಲ್ಲ ಎಂದರು. ಇನ್ನು ಬಿಜೆಪಿ ನಾಯಕರು ಮದ್ದೂರಿಗೆ ಹೋಗುತ್ತಿರುವ ವಿಚಾರವಾಗಿ ವ್ಯಂಗ್ಯ ಮಾಡಿದ ಅವರು, ಅವರಿಗೆ ಬೇರೆ ಏನು ಕೆಲಸ ಇಲ್ಲ. ಜನರನ್ನ ಭಾಗ ಮಾಡುವುದೇ ಅವರ ಕೆಲಸ. ಬೆಂಕಿ ಇಕ್ಕೋದೇ ಅವರ ಕೆಲಸ,