ಮಹಾರಾಷ್ಟ್ರದಲ್ಲಿ ಮಳೆ ಹಿನ್ನೆಲೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣೆಯ ಭೋರ್ಗರೆತ....ಕೃಷ್ಣೆಯ ಅಬ್ಬರಕ್ಕೆ ಪ್ರವಾಹ...ಉಕ್ಕಿ ಹರಿಯುತ್ತಿರೋ ಕೃಷ್ಣಾ ನದಿ....ಬೆಳೆಗಳೆಲ್ಲಾ ಕೃಷ್ಣಾರ್ಪಣ. ಜಲಾವೃತವಾದ ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರ. ಹಿಪ್ಪರಗಿ ಜಲಾಶಯದಿಂದ ಸಧ್ಯ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರಿನ ಹೊರ ಹರಿವು.ಕಬ್ಬು, ತೊಗರಿ, ಉದ್ದು ಸೇರಿದಂತೆ ನೂರಾರು ಎಕರೆ ಬೆಳೆಗಳು ಜಲಾವೃತ. ಚಿಕ್ಕಪಡಸಲಗಿ ಸೇತುವೆ ಜಲಾವೃತಕ್ಕೆ ಒಂದೆರಡು ಅಡಿ ಮಾತ್ರ ಬಾಕಿ.ಜಮಖಂಡಿಯಿಂದ ವಿಜಯಪುರಕ್ಕೆ ಸಂಪರ್ಕಿಸುವ ಚಿಕ್ಕಪಡಲಗಿ ಸೇತುವೆ.ಚಿಕ್ಕಪಡಸಲಗಿ ಸೇತುವೆ ಮೇಲೆ ಜೀವ ಕೈಯಲ್ಲಿ ಹಿಡಿದು ವಾಹನ ಸವಾರರ ಸಂಚಾರ. ಅಕ್ಕಪಕ್ಕದ ಹೊಲಗದ್ದೆಗಳಿಗೆ ನುಗ್ಗಿರೋ ನೀರು.