ನಗರದಲ್ಲಿ ಕಳೆದ ಒಂದು ವಾರದಲ್ಲಿ ಹೆಚ್ಚಿರುವ ಮಂಗಗಳ ಉಪಟಳ ತಪ್ಪಿಸಲು ಅರಣ್ಯ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶಿವಶಂಕರ್ ತರನಳ್ಳಿ ಗುರುವಾರ ರಾತ್ರಿ 7:30ಕ್ಕೆ ಸಲಹೆ ನೀಡಿದರು. ಸಮಸ್ಯೆ ಕುರಿತು ಜಿಲ್ಲಾ ಅರಣ್ಯ ಅಧಿಕಾರಿಗಳಿಗೆ ಸಂಪರ್ಕಿಸಿದಾಗ ಸಕಾರಾತ್ಮಕ ಸ್ಪಂದಿಸಿದ್ದಾರೆ. ಈ ವಿಷಯದಲ್ಲಿ ವಲಯ ಅರಣ್ಯ ಅಧಿಕಾರಿಗಳು ದೂರು ಹೇಳಿದವರ ಜತೆ ಕೇವಲ ಮಾತನಾಡಿದ್ದು ತರವಲ್ಲ ಎಂದು ನೋವಿನಿಂದ ನುಡಿದರು.