ಡಿಜಿಟಲ್ ಹೆಸರಿನಲ್ಲಿ ದಾವಣಗೆರೆ ನಗರದ ಶಿಕ್ಷಕಿಯೊಬ್ಬರಿಗೆ 22.40 ಲಕ್ಷ ರೂ ವಂಚಿಸಿದ್ದು, ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಬುಧವಾರ ಸಂಜೆ 6 ಗಂಟೆಗೆ ತಿಳಿಸಿದೆ. ನನ್ನ ಹೆಸರಿನ ಕೋರಿಯರ್ ನಲ್ಲಿ ಡ್ರಗ್ಸ್ ಇದೆ. ಡಿಸಿಪಿ ಮೇಡಂ ಮಾತನಾಡುತ್ತಾರೆ ಎಂದು ಹೇಳಿದ ನರೇಶ್ ಗೋಯಲ್ ಎಂಬ ವ್ಯಕ್ತಿ. ನಿಮ್ಮ ಖಾತೆಗೆ ಅಕ್ರಮ ಹಣ ವರ್ಗಾವಣೆ ಆಗಿದೆ. ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಲೀಗಲ್ ಅಥವ ಇಲ್ಲೀಗಲ್ ಎಂದು ಚೆಕ್ ಮಾಡಬೇಕು ಎಂದು 22.40 ಲಕ್ಷ ರೂ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಶಿಕ್ಷಕಿಯೊಬ್ಬರು ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ನೀಡಿದ್ದರು.