ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಿ ಎಸ್ ಪಿ ಬಿ ಎಸ್ ತಳವಾರ್ ಅವರು ರೌಡಿಗಳನ್ನು ಠಾಣೆಗೆ ಕರೆಯಿಸಿ ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಕಾರಣರಾಗದಂತೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಆಗಸ್ಟ್ 23 ರ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರೌಡಿಶೀಡರ್ ಗಳನ್ನು ಠಾಣೆಗೆ ಕರೆಯಿಸಿ ಶಾಂತಿ ಕದಡದಂತೆ ಖಡಕ್ ಎಚ್ಚರಿಕೆ ಕೊಟ್ಟರು. ಈ ವೇಳೆ ಪಿಐ ಹಾಗೂ ಪಿಎಸ್ಐ ಅಧಿಕಾರಿಗಳು ಇದ್ದರು.