ಹೊಲಕ್ಕೆ ತೆರಳಿದ್ದ ವೇಳೆ ಹಳ್ಳಕ್ಕೆ ನೀರು ಬಿಟ್ಟ ಹಿನ್ನೆಲೆ ಹಳ್ಳದಲ್ಲಿ ವ್ಯಕ್ತಿಯೊಬ್ಬ ಸಿಲುಕಿ ಪರದಾಡಿದ ಘಟನೆ ಕೊಪ್ಪಳ ತಾಲೂಕಿನ ಓಜನಹಳ್ಳಿ ಬಳಿಯ ಹಿರೇಹಳ್ಳದಲ್ಲಿ ನಡೆದಿದೆ. ನಿಂಗಪ್ಪ ಉಳ್ಳಾಗಡ್ಡಿ ಎಂಬ ವ್ಯಕ್ತಿ ಹಳ್ಳದಲ್ಲಿ ಸಿಲುಕಿದ್ದಾನೆ. ಹಳ್ಳದಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಯಾರಿ ನಡೆಸಿದ್ದಾರೆ...