ದಾಂಡೇಲಿ : ಗಣಪತಿ ಹಬ್ಬ ಅಂದರೆ ಅದು ಸರ್ವರ ಹಬ್ಬ. ಈ ಬಗ್ಗೆ ಎರಡು ಮಾತಿಲ್ಲ. ಅಂದ ಹಾಗೆ ದಾಂಡೇಲಿ ನಗರದ ನಗರಸಭೆ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹೀಗೆ ವಿವಿಧ ಸರಕಾರಿ ಇಲಾಖೆಗಳ ಕಾರ್ಯಾಲಯದಲ್ಲಿ ಶ್ರೀ ಗಣೇಶನನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ದಾಂಡೇಲಿ ನಗರದ ಹೆಸ್ಕಾಂ ಇಲಾಖೆಯ ಆವರಣದಲ್ಲಿ ಹೆಸ್ಕಾಂ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಹೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಅರಿವನ್ನು ಹಾಗೂ ಜನಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಆಕರ್ಷಕ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿದೆ. ಗಣಪತಿ ಹಬ್ಬದ ಆರಾಧನೆ ಜೊತೆ ಜೊತೆಗೆ ಇಲಾಖೆಯ ಡಿ ಇರುವ