ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು ಕಾಡಾನೆ ಕಾಡುಕೋಣಗಳು ಅಷ್ಟೇ ಅಲ್ಲದೆ ಇದೀಗ ಹೆಬ್ಬಾವಿನ ಸರದಿ ಆರಂಭವಾಗಿದ್ದು. ಎಲ್ಲಂದರಲ್ಲಿ ಭಾರಿ ಗಾತ್ರದ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಲ್ಕೆರೆ ಬಳಿ ಭಾರಿ ಗಾತ್ರದ ಹೆಬ್ಬಾವು ಒಂದು ಕಾಣಿಸಿಕೊಂಡಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ.