ಆಟೋ ಬೈಕ್ ಮಧ್ಯ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂರು ಜನ ಬಾಲ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಪಟ್ಟಣದ ಕೆಇಬಿ ಬೈಪಾಸ್ ಮಾರ್ಗದ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ 3ಗಂಟೆ ಆಸುಪಾಸು ಸಂಭವಿಸಿದ್ದಾಗಿ ತಿಳಿದುಬಂದಿದೆ. ಗಾಯಾಳುಗಳನ್ನು ಶ್ರೇಯಸ್ ಬಸವಲಿಂಗ, ಸತ್ಯಶ್ರೀ ಸಾಗರ್ ಮತ್ತು ಗೌರಿ ನಾಗೇಶ್ ಎನ್ನಲಾಗಿದೆ..ಗಾಯಾಳು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಗೆ ಕಳಿಸಲಾಗಿದೆ.