ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ದಂಪತಿಗಳು ಜೀವನದಲ್ಲಿ ಒಂದಾಗಿ ಸಂಸಾರ ಮಾಡಿದ ನಂತರ ಸಾವಿನಲ್ಲಿ ಒಂದಾದ ಅಪರೂಪದ ಘಟನೆ ರವಿವಾರ ನಡೆದಿದೆ. ಗ್ರಾಮದ ವೀರಬಸಪ್ಪ ಗೋವಿಂದಪ್ಪ ಗೋಣಗೇರ(70) ಎಂಬುವರು ವಯೋಸಹಜದಿಂದ ಸಾವನ್ನಪ್ಪಿದರು. ಇವರು ಮೃತಪಟ್ಟ ನಂತರ ಗ್ರಾಮಸ್ಥರು ವೀರಬಸಪ್ಪನ ಶವಸಂಸ್ಕಾರ ಮಾಡಲು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಂತ್ಯಕ್ರಿಯೆ ಮಾಡುವ ಸಮಯದಲ್ಲಿ ವೀರಬಸಪ್ಪ ಹೆಂಡತಿ ಬಸಮ್ಮ ಗೋಣಗೇರ(64) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.