ಸಾರ್ವಜನಿಕ ಅಹವಾಲು ಸ್ವೀಕಾರ; ಕುಂದುಕೊರತೆ; ಬಾಕಿ ಅರ್ಜಿಗಳ ವಿಚಾರಣೆಗಾಗಿ ಆಗಸ್ಟ್ 28 ರಿಂದ ಆಗಸ್ಟ್ 30ರವರೆಗೆ ಮೂರು ದಿನಗಳ ಕಾಲ ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪ ಅವರು ಒಟ್ಟು 24 ಕಡೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಒಟ್ಟು 18 ಸುಮೋಟೊ ಕೇಸ್ ದಾಖಲಿಸಿದ್ದಾರೆ. ಆಗಸ್ಟ್ 28 ರಂದು ಮೊದಲ ದಿನ ಬೆಳಗ್ಗೆ 6.30 ರಿಂದ ಆರಂಭಿಸಿ ರಾತ್ರಿ 9.30ರವರೆಗೆ ಅನಿರೀಕ್ಷಿತ ಭೇಟಿ ಮುಂದುವರೆಸಿ ಮೊದಲ ದಿನವೇ 14 ಸುಮೋಟೊ ಕೇಸ್ ದಾಖಲಿಸಿದರು. ಮಳೆಯಲ್ಲೂ ಅನಿರೀಕ್ಷಿತ ಭೇಟಿ ಮುಂದುವರೆಸಿ ಹಾಸ್ಟೆಲಗಳಿಗೆ ಭೇಟಿ ಮಾಡಿ ವಸತಿ ನಿಲಯಗಳ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದರು. ಎರಡನೇ ದಿನ ಆಗಸ್ಟ್ 29ರಂದು ಮತ್ತು ಕೊನೆಯ ದಿನ ಆ