ಕಲಬುರಗಿ : ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಲ್ಲಿ ಯುವತಿಯೊಬ್ಬಳ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಳಖೇಡ ಗ್ರಾಮದ ಬಳಿಯಿರೋ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ಸಾರ್ವಜನಿಕ ಉದ್ಯಾನವನದ ಬದಿ 20 ವರ್ಷದ ಭಾಗ್ಯ ಸುಲಹಳ್ಳಿ ಮೃತದೇಹ ಪತ್ತೆಯಾಗಿದೆ.. ಈ ಬಗ್ಗೆ ಸೆ18 ರಂದು ಸಂಜೆ 5 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಇನ್ನೂ ಭಾಗ್ಯಶ್ರೀ ಸೆ11 ರಂದು ನಾಪತ್ತೆಯಾಗಿದ್ದಳು.. ಸದ್ಯ ಏಳು ದಿನಗಳ ಬಳಿಕ ಭಾಗ್ಯಶ್ರೀ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮಳಖೇಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಯೋ ಆತ್ಮಹತ್ಯೆಯೋ ಅನ್ನೊದು ತನಿಖೆ ಬಳಿಕವಷ್ಟೆ ತಿಳಿದುಬರಲಿದೆ..