ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪಕ್ಕದ ರಸ್ತೆಯಲ್ಲಿ ಗೂಳಿ ವಾಹನ ಸವಾರರನ್ನು ಭಯಭೀತಿಗೊಳಿಸಿದೆ. ರಸ್ತೆಗೆ ಅಡ್ಡಾದಿಡ್ಡಿಯಾಗಿ ಓಡಾಡುವ ಗೂಳಿ ಕಂಡು ವಾಹನ ಸವಾರರು ದಾರಿ ಬಿಟ್ಟು ರಸ್ತೆ ಬದಿಯಲ್ಲಿ ಭಯಭೀತರಾಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೆ ರಾಯಚೂರು ನಗರದಲ್ಲಿ ಅದೆಷ್ಟೇ ಕ್ರಮ ಕೈಗೊಂಡರು ಬಿಡಾಡಿ ದನಗಳ ಹಾವಳಿ ಮಾತ್ರ ನಿಲ್ಲುತ್ತಿಲ್ಲ ಎಂದು ರಾಯಚೂರು ನಗರ ನಿವಾಸಿಯಾದ ವೀರೇಶ್ ಗುರುವಾರ ಪ್ರಕಟಣೆ ನೀಡಿ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಬದಿಯಲ್ಲಿ ನಿಂತರೆ ಗೂಳಿ ಯಾವಾಗ ಬಂದು ತಿವಿಯುತ್ತೋ ಎಂಬ ಭಯ ಕಾಡುತ್ತದೆ. ಹೀಗಾಗಿ ಬಿಡಾಡಿ ದನಗಳಿಗೆ ಇನ್ನಾದರೂ ಕಡಿವಾಣ ಹಾಕಲು ಒತ್ತಾಯಿಸಿದ್ದಾರೆ.