ಹನೂರು ತಾಲೂಕಿನ ಕುರಟ್ಟಿಹೂಸರು ಸಮೀಪದ ದೂಡ್ಡಭಾಗಿಮರದ ಹಳ್ಳದ ಬಳಿ ಒಂದು ಹೆಣ್ಣಾನೆಯ ಮೃತದೇಹ ಪತ್ತೆಯಾದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.ಈ ಆನೆ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯರಾಮಾಪುರ ವನ್ಯಜೀವಿ ವಲಯದ ವ್ಯಾಪ್ತಿಯ ಕುರಟ್ಟಿಹೂಸರು ಸಮೀಪದ ದೂಡ್ಡಭಾಗಿಮರದ ಹಳ್ಳದ ಬಳಿಪತ್ತೆಯಾಗಿದೆ. ವಲಯದ ಗಸ್ತು ಕಾರ್ಯದ ವೇಳೆ, ಅರಣ್ಯ ಇಲಾಖೆ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಕೂಡಲೇ ವಲಯ ಅಧಿಕಾರಿ ಉಮಾಪತಿ ಅವರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಯ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಮೇಲ್ನೋಟಕ್ಕೆ ಈ ಆನೆಯ ಸಾವಿಗೆ ಯಾವುದೇ ಅವಘಡದ ಲಕ್ಷಣಗಳು ಕಂಡುಬಂದಿಲ್ಲ . ಸ್ವಾಭಾವಿಕವಾಗಿ ನಿಧನ ಹೊಂದಿರಬಹುದು ಎನ್ನಲಾಗಿದೆ