ತುಂಗಾ ಮೇಲ್ದಂಡೆ ಕಾಲುವೆಗೆ ಬಿದ್ದು ಎರಡು ಎತ್ತುಗಳು ಸಾವನ್ನಪಿದ ಘಟನೆ ತಾಲೂಕಿನ ಕೂರಗುಂದ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಭರಮಪ್ಪ ಕೆಂಚಣ್ಣನವರ ಎಂಬ ರೈತರಿಗೆ ಸೇರಿದ ಎರಡು ಎತ್ತುಗಳು ಬೆಳಗ್ಗೆ ಜಮೀನಿಗೆ ತೆರಳುತ್ತಿದ್ದಾಗ ಎತ್ತಿನ ಗಾಡಿ ಸಮೇತ ಕಾಲುವೆಗೆ ಬಿದ್ದು, ಈ ಘಟನೆ ಸಂಭವಿಸಿದೆ. ಈ ವೇಳೆ ಎತ್ತಿನ ಗಾಡಿಯಲ್ಲಿದ್ದ ಬೀರಪ್ಪ ಎಂಬುವವರು ಗಾಯಗೊಂಡಿದ್ದಾರೆ. ಲಕ್ಷಾಂತರ ಬೆಲೆಬಾಳುವ ಎತ್ತುಗಳನ್ನು ಕಳೆದುಕೊಂಡ ರೈತನ ರೋಧನೆ ಅಲ್ಲಿ ನೆರೆದಿದ್ದ ಜನರ ಕಣ್ಣಂಚಿನಲ್ಲಿ ನೀರು ತರಿಸುವಂತಿತ್ತು. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗುತ್ತಲ ಪೊಲೀಸರು ಹಾಗೂ ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ