ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂ ಧಾರ್ಮಿಕ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದ್ದು ಇದರ ವಿರುಧ್ಧ ಅವಹೇಳನ ಮಾಡಬಾರದು ಹಾಗೂ ಅಪಪ್ರಚಾರ ಮಾಡಬಾರದು ಎಂಬುದು ಮಠಾಧೀಶರ ನಿಲುವಾಗಿದೆ ಎಂದು ಸಾಲೂರು ಮಠದ ಪೀಠಾಧಿಪತಿ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಮಧ್ಯಾಹ್ನ ಈ ಕುರಿತು ಅವರು ಮಾತನಾಡಿ, ಸೆ.3 ರ ಬುಧವಾರದಂದು ವಿವಿಧ ಮಠಾಧೀಶರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಅಪಾರ ಶ್ರದ್ಧಾಭಕ್ತಿ ನಂಬಿಕೆಯನ್ನು ಇರಿಸಿಕೊಂಡಿದ್ದು, ಇತ್ತೀಚಿನ ಕೆಲವು ಅನಪೇಕ್ಷಿತ ವಿದ್ಯಮಾನಗಳು ಭಕ್ತರ ಭಕ್ತಿ ಭಾವನೆಗಳಿಗೆ ಅಘಾತವನ್ನುಂಟುಮಾಡಿದೆ ಎಂದರು.