ಪ್ರಪಂಚ ಪ್ರಸಿದ್ದ ಮಾವಿನ ನಗರಎಂದು ಪ್ರಸಿದ್ದವಾದ ಈ ತಾಲ್ಲೂಕಿನಲ್ಲಿ ಹಿಂದು ಮುಸ್ಲಿಂ ಸಮುದಾಯಗಳು ಪರಸ್ಪರ ಸೋದರತ್ವದಿಂದ ಬದುಕುತ್ತಿದ್ದಾರೆ ಇದನ್ನು ಹೀಗೆಯೇ ಮುಂದುವರೆಸಿ ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳು ಭಕ್ತಿಯಿಂದ ಆಚರಿಸಲು ಮುಂದಾಗಬೇಕು ಯಾವುದೇ ಅಹಿತರ ಘಟನೆಗಳಿಗೆ ಅವಕಾಶ ನೀಡಬಾರದೆಂದು ನೂತನ ಡಿ.ವೈ.ಎಸ್.ಪಿ ಮನಿಶಾ ಮೋಹಿನಿ ತಿಳಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಸಹಾ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳು ಏಕಕಾಲದಲ್ಲಿ ಬಂದಿದ್ದು ಇದರ ಹಿನಲೆಯಲ್ಲಿ ಶ್ರೀನಿವಾಸಪುರ ಪೋಲೀಸ್ ಠಾಣೆಯ ಸಮಸ್ತ ಪೋಲೀಸ್ ಸಿಬ್ಬಂದಿ ಡಿ.ವೈ.ಎಸ್.ಪಿ ಮನಿಶಾ ಮೋಹಿನಿ ನೇತೃತ್ವದಲ್ಲಿ ಪಟ್ಟಣದ ರಥಬೀದಿಗಳಲ್ಲಿ ಹಾಗು ಚಿಂತಾಮಣಿ ವೃತ್ತ ಅಲ್ಪ ಸಂಖ್ಯಾತರ ವೃತ್ತಗಳಲ್ಲಿ ಪಥ ಸಂಚಲನ ಮುಗಿಸಿ ನಂತರ ಮಾತನಾಡಿದ ಡಿ.ವ