ರಾಜ್ಯ ಸರ್ಕಾರ ಸೆಪ್ಟೆಂಬರ್ 22ರಿಂದ ಹಿಂದುಳಿದ ವರ್ಗಗಳ ಆಯೋಗದ ಸಹಕಾರದಲ್ಲಿ ಜಾತಿ ಸಮೀಕ್ಷೆ ನಡೆಸುತ್ತಿದ್ದು, ಲಿಂಗಾಯತ ಸಮುದಾಯದವರು ತಮ್ಮ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಯಬೇಕು. ಜಾತಿಯ ಕಾಲಂನಲ್ಲಿ ತಮ್ಮ ಉಪ ಪಂಗಡಗಳನ್ನು ಇಲ್ಲವೇ ಲಿಂಗಾಯತ ಎಂದೇ ಬರೆಸಬೇಕೆಂದು ನಗರದ ಬಸವ ಬಳಗ ಮನವಿ ಮಾಡಿದೆ. ಶುಕ್ರವಾರ ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಬಳಗದ ಅಧ್ಯಕ್ಷ ಎ.ಹೆಚ್.ಹುಚ್ಚಪ್ಪ ಮಾತನಾಡಿ, ಲಿಂಗಾಯತರು ಹಿಂದೂಗಳು ಅಲ್ಲ, ವೀರಶೈವರೂ ಅಲ್ಲ. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರಿಂದ ಸ್ಥಾಪಿಸಲ್ಪಟ್ಟಿದೆ ಎಂದರು.