ಬೆಂಗಳೂರಿಗೆ ತೆರಳಿದ್ದ ಮಾರಚಾಕನಹಳ್ಳಿ ಗ್ರಾಮದ ಮಹಿಳೆಯ ಮನೆಯಲ್ಲಿ ಮಾಂಗಲ್ಯ ಸರ ಕಳವ ಮಾಡಿರುವ ಘಟನೆ ಜರುಗಿದೆ. ಶಾಂತಮ್ಮ ಸರ ಕಳೆದುಕೊಂಡವರು. ಬೆಂಗಳೂರಿನಲ್ಲಿರುವ ಮಗಳ ಮನೆಗೆ ಗೌರಿ ಗಣೇಶ ಹಬ್ಬಕ್ಕೆ ತೆರಳಿದ ಶಾಂತಮ್ಮ ಮನೆ ಬೀಗ ಹಾಕಿಕೊಂಡು ತೆರಳಿದ್ದಾರೆ. ರಾತ್ರಿ ವೇಳೆ ಮಬೆ ಬಾಗಿಲು ಹೊಡೆದು ₹ 1.45 ಲಕ್ಷ ಮೌಲ್ಯದ 20 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕಳವು ಮಾಡಿದ್ದಾರೆ. ಘಟನೆ ಕುರಿತು ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶನಿವಾರ ಮಾಧ್ಯಮ ಮಾಹಿತಿ ನೀಡಿದ್ದಾರೆ. ಪಿಎಸ್'ಐ ರಾಘವೇಂದ್ರ ಎಂ ಕಠಾರಿ ದೂರು ದಾಖಲಿಸಿಕೊಂಡು ತನಿಖೆ ಅರಂಭಿಸಿದ್ದಾರೆ.