ಮಳವಳ್ಳಿ : ಸೆಪ್ಟೆಂಬರ್ 13 ಹಾಗೂ 14 ರಂದು ಮಳವಳ್ಳಿ ತಾಲ್ಲೂಕಿನ ವಿಶ್ವವಿಖ್ಯಾತ ಗಗನ ಚುಕ್ಕಿ ಜಲಪಾತವಿರುವ ಶಿವನ ಸಮುದ್ರ ಗ್ರಾಮದ ಬಳಿ ಏರ್ಪಾ ಡಾಗಿರುವ ಗಗನಚುಕ್ಕಿ ಜಲಪಾ ತೋತ್ಸವಕ್ಕೆ ಶಿವನಸಮುದ್ರ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ. ಗ್ರಾಮದ ಪ್ರವೇಶ ದ್ವಾರದಲ್ಲೇ ಸಮಾರಂಭ ಆಯೋಜಿಸಲಾಗಿದ್ದು ಇದಕ್ಕಾಗಿ ಬೃಹತ್ ವೇದಿಕೆ ಸಿದ್ದವಾ ಗಿದ್ದು ಸುಮಾರು 50 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಸಾಯಂಕಾಲ 6 ಗಂಟೆ ಸಮಯದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರ ಅಧಿಕಾರಿಗಳ ಜೊತೆ ವೇದಿಕೆ ಆವರಣಕ್ಕೆ ಭೇಟಿ ನೀಡಿದ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಸಮಾರಂಭದ ಸಿದ್ದತೆಯ ಪರಿಶೀಲನೆ ನಡೆಸಿದರು.