Download Now Banner

This browser does not support the video element.

ಚಿತ್ರದುರ್ಗ: ನಗರದಲ್ಲಿ ಮಹಿಳಾ ಪೌರ ಕಾರ್ಮಿಕರಿಗೆ ಗೌರಿ-ಗಣೇಶ ಹಬ್ಬದ ಕೊಡುಗೆಯಾಗಿ ಬಾಗಿನ ಅರ್ಪಣೆ

Chitradurga, Chitradurga | Aug 25, 2025
ಆಗಸ್ಟ್. 25 : ನಗರಸಭೆಯ 72 ಮಹಿಳಾ ಪೌರ ಕಾರ್ಮಿಕರಿಗೆ ಜಿಲ್ಲಾ ಪೌರ ಕಾರ್ಮಿಕರ ಸಂಘದಿಂದ ಗೌರಿ-ಗಣೇಶ್ ಹಬ್ಬದ ಕೊಡುಗೆಯಾಗಿ ಎಲೆ ಅಡಿಕೆ, ಹೂವು, ಹಣ್ಣು, ಬಳೆ ಸೀರೆಯಿರುವ ಬಾಗಿನ ನೀಡಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‍ಕುಮಾರ್ ಭಂಡಾರು ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ಅರ್ಪಿಸಿ ಮಾತನಾಡುತ್ತ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ತವರು ಮನೆಯಿಂದ ಬಾಗಿನ ನೀಡುವುದು ಹಿಂದಿನಿಂದಲೂ ನಡೆದು ಬಂದಿರುವ ಪದ್ದತಿ. ಜಿಲ್ಲಾ ಪೌರ ಕಾರ್ಮಿಕರ ಸಂಘದವರು ಬಾಗಿನ ಅರ್ಪಿಸಿ ಗೌರವಿಸುತ್ತಿರುವುದು ಅತ್ಯುತ್ತಮವಾದುದು ಎಂದು ಶ್ಲಾಘಿಸಿದರು.
Read More News
T & CPrivacy PolicyContact Us