ಹಾಸ್ಟೆಲ್ ನಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣ,ಚಿಕ್ಕೋಡಿ ತಾಲೂಕಾ ಆಸ್ಪತ್ರೆಗೆ ಸಿಇಒ ರಾಹುಲ್ ಶಿಂಧೆ ಭೇಟಿ. ಹಾಸ್ಟೆಲ್ ನಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣ ಹಿನ್ನಲೆಯಲ್ಲಿ ಚಿಕ್ಕೋಡಿ ತಾಲೂಕಾ ಆಸ್ಪತ್ರೆಗೆ ಶನಿವಾರ ಸಿಇಓ ರಾಹುಲ ಶಿಂಧೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು. ಮುರಾರ್ಜಿ ದೇಸಾಯಿ ಹಾಸ್ಟೇಲ್ ನ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ಅಮಾನತ್ತು ಮಾಡಲಾಗಿದೆ. ವಿಷಾಹಾರ ಸೇವಿಸಿ 119 ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾಗಿದ್ದರು.53 ಜನ ಮಕ್ಕಳಿಗೆ ಇನ್ನು ಚಿಕಿತ್ಸೆ ಮುಂದುವರೆದಿದೆ.40 ಮಕ್ಕಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.