ರಸ್ತೆ ಬದಿ ಲಾರಿ ನಿಲ್ಲಿಸಲು ಹೋಗಿ ಹಳ್ಳಕ್ಕೆ ಸಿಮೆಂಟ್ ತುಂಬಿದ ಲಾರಿ ಇಳಿದ ಘಟನೆ ಕೊಳ್ಳೇಗಾಲ ತಾಲೂಕಿನ ದಾಸನಪುರ ಬಳಿ ನಡೆದಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡಬಳ್ಳಾಪುರದಿಂದ ಚಾಮರಾಜನಗರಕ್ಕೆ ನವೀನ್ ಎಂಬವರು ಸಿಮೆಂಟ್ ತುಂಬಿಕೊಂಡು ಬರುತ್ತಿದ್ದಾಗ ದಾಸನಪುರ ಸಮೀಪ ರಸ್ತೆಬದಿಗೆ ಲಾರಿ ನಿಲ್ಲಿಸಲು ಮುಂದಾದಾಗ ಭಾರದಿಂದಾಗಿ ಲಾರಿ ಹಳ್ಳಕ್ಕೆ ಇಳಿದಿದೆ.ಸದ್ಯ, ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತುವ ಕಾರ್ಯ ನಡೆಯುತ್ತಿದೆ.