ಈದ್ ಮಿಲಾದ್ ಹಿನ್ನೆಲೆ ಬಾಗಲಕೋಟೆ ನಗರದಲ್ಲಿ ಹಾಕಿದ್ದ ಕಟೌಟ್ ನಲ್ಲಿ ಹಮಾಸ್ ಉಗ್ರರ ಲೀಡರ್ ಭಾವಚಿತ್ರ ಅಳವಡಿಸಿದ್ದನ್ನ ಖಂಡಿಸಿ ಹಿಂದೂಪರ ಸಂಘನೆಗಳ ಕಾರ್ಯಕರ್ತರು ಬಾಗಲಕೋಟೆ ಶಹರ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಬಾಗಲಕೋಟೆ ಪಂಕಾ ಮಸೀದಿಯಲ್ಲಿನ ಕಟೌಟ್ ನಲ್ಲಿ ಹಮಾಸ್ ಲೀಡರ್ ಗಳ ಭಾವಚಿತ್ರಗಳನ್ನ ಅಳವಡಿಸಲಾಗಿತ್ತು. ಹಮಾಸ್ ಲೀಡರ್ ಗಳ ಭುಜದ ಮೇಲೆ ಪ್ಯಾಲಿಸ್ತೇನ್ ಧ್ವಜ ಇರುವ ಭಾವಚಿತ್ರವನ್ನ ಕಿಡಿಗೇಡಿಗಳುಹಾಕಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಭುಜದ ಮೇಲಿನ ಪ್ಯಾಲಿಸ್ತೇನ್ ಧ್ವಜದ ಮೇಲೆ ಹಸಿರು ಬಟ್ಟೆ ಅಂಟಿಸಿ ಮರೆಮಾಚಿದ್ದರು. ಸ್ಟೇಟಸ್ ಕೂಡ ಹಾಕಿದ ಕಿಡಿಗೇಡಿಗಳು. ಕಿಡಿಗೇಡಿಗಳ ಕೃತ್ಯಕ್ಕೆ ಹಿಂದುಪರ ಸಂಘಟನೆಗಳಿಂದ ಖಂಡನೆ. ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ.