ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿರುವ ಗಣಪತಿ ದೇವಾಲಯಲ್ಲಿ ಇಂದು ಬ್ರಹ್ಮ ರಥೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ತ್ರಿಮೂರ್ತಿಗಳಿಂದ ಸ್ಥಾಪನೆಯಾದ ಕುರುಡುಮಲೆ ಸಾಲಿಗ್ರಾಮ ಗಣಪನ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗಿನಿಂದಲು ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಗಣೇಶ ಚತುರ್ಥಿ ಹಿನ್ನೆಲೆ ವಿನಾಯಕನ ದರ್ಶನಕ್ಕೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು.ರಾಜ್ಯದ ದೇವಮೂಲೆಯಲ್ಲಿರುವ ಮುಳಬಾಗಿಲಿನ ಕುರುಡುಮಲೆ ವಿನಾಯಕ ದೇವಸ್ಥಾನ ಇದಾಗಿದ್ದು,108 ಅಡಿಯ ಸಾಲಿಗ್ರಾಮ ಶಿಲೆಯಿಂದ ಗಣಪತಿಯನ್ನು ನಿರ್ಮಿಸಲಾಗಿದೆ. ಸಚಿವ ಕೆ. ಎಚ್ ಮುನಿಯಪ್ಪ, ಶಾಸಕ ಸಮೃದ್ಧಿ ಮಂಜುನಾಥ್ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿದ್ದರು.