ಶಿವಮೊಗ್ಗ ಭಾರತಿ ಕಾಲೋನಿಯ 2ನೇ ಕ್ರಾಸ್ ನ ನಿವಾಸಿಗಳು ಹಾಗೂ ಎನ್.ಟಿ ರಸ್ತೆಯಲ್ಲಿ ಗಿರಿ ಟಿಫನ್ ಸೆಂಟರ್ ನಡೆಸುತ್ತಿದ್ದ ದಂಪತಿಗಳಾದ ಶ್ರೀನಿವಾಸ್(50) ಹಾಗೂ ಜಯಮ್ಮ(45) ನಾಪತ್ತೆಯಾಗಿದ್ದಾರೆ. ಜುಲೈ 5ರಂದು ಮನೆಯಿಂದ ಹೊರಗೆ ಹೋದ ಶ್ರೀನಿವಾಸ್ ಹಾಗೂ ಜಯಮ್ಮ ಇದುವರೆಗೆ ವಾಪಸ್ ಆಗಿರುವುದಿಲ್ಲ. ಸ್ನೇಹಿತರು, ಸಂಬಂಧಿಕರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ.ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಅಧಿಕಾರಿಗಳು ಪ್ರಕಟಣೆ ಮೂಲಕ ಸೋಮವಾರ ತಿಳಿಸಿರುತ್ತಾರೆ.