ನಗರದ ಹೊರ ವಲಯದಲ್ಲಿರುವ ಅಸ್ಕಿಹಾಳದಲ್ಲಿ ಗಣಪತಿಯ 9ನೇ ದಿವಸದ ವಿಸರ್ಜನೆ ಅಂಗವಾಗಿ ಗುರುವಾರ ರಾತ್ರಿ ನಡೆದ ಮೆರವಣಿಗೆಯಲ್ಲಿ ಯುವಕರು ಡಿಜೆ ಹಾಡಿಗೆ ಸಂಭ್ರಮದಿಂದ ಹೆಜ್ಜೆ ಹಾಕಿದರು. ಅಸ್ಕಿಹಾಳದ ಮಹರ್ಷಿ ವಾಲ್ಮೀಕಿ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪನೆ ಮಾಡಲಾದ ಗಣಪತಿಯನ್ನು ಸಂಭ್ರಮ ಸಡಗರದಿಂದ ಮೆರವಣಿಗೆ ಮಾಡಿ ನಗರದ ಖಾಸ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು. ಏಳನೇ ದಿವಸ ಅಸ್ಕಿಹಾಳದಲ್ಲಿ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಒಂಭತ್ತು ದಿನಗಳಿಂದ ಪೂಜೆ ಪುನಸ್ಕಾರ ನೆರವೇರಿಸಿ ಗಣಪತಿಗೆ ಭಕ್ತಿ ಭಾವ ಮೆರೆದಿದ್ದ ಯುವಕರು ಒಂಭತ್ತನೇ ದಿನಕ್ಕೆ ಗಣಪನನ್ನ ವಿಸರ್ಜಿಸಿ ತೆರೆ ಎಳೆದರು.