ಕಾಲೇಜಿಗೆ ಪೀಸ್ ಕಟ್ಟಲು ಹೋದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಉಡುಪಿ ತಾಲೂಕು 76 ಬಡಗು ಬೆಟ್ಟು ಗ್ರಾಮದ ಬೈಲೂರು ಬಬ್ಬು ಸ್ವಾಮಿ ದೇವಸ್ಥಾನದ ಬಳಿ ನೆಡೆದಿದೆ. ಬಾಡಿಗೆ ಮನೆ ಒಂದರಲ್ಲಿ ವಾಸವಿದ್ದ ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಹನಾ 24 ವರ್ಷ ಎಂಬ ಯುವತಿಯು ಮನೆಯಿಂದ ಕಾಲೇಜಿಗೆ ಫೀಸ್ ಕಟ್ಟಲೆಂದು ಹೋದವಳು ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ.