ಬಾಗೇಪಲ್ಲಿ ಪಟ್ಟಣದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಎಸ್ಎನ್ ಸುಬ್ಬಾರೆಡ್ಡಿಯವರು ಮಾತನಾಡಿ,ಶಿಕ್ಷಕ ವೃತ್ತಿ ಎಂಬುದು ಶ್ರೇಷ್ಠವಾದ ವೃತ್ತಿ, ಶಿಕ್ಷಕನೊಬ್ಬ ತಪ್ಪು ಮಾಡಿದರೆ ಸಮಾಜವೇ ತಪ್ಪು ಮಾಡಿದಂತಾಗುತ್ತದೆ. ದೇಶ ಕಟ್ಟುವ ಕೆಲಸ ಶಿಕ್ಷಕನ ಕೈಯಲ್ಲಿರುತ್ತದೆ.ಹಾಗಾಗಿ ಯಾವುದೇ ರೀತಿ ತಪ್ಪು ಮಾಡದೇ ಶಿಕ್ಷಕ ವೃತ್ತಿಪರತೆಯನ್ನು ಮೆರೆಯಬೇಕು,ತಮ್ಮ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಶಿಕ್ಷಕರಿಗೆ ಕಿವಿ ಮಾತನ್ನು ಹೇಳಿದರು.