ಜೋಯಿಡಾ : ಜಿಲ್ಲೆಯ ಜೀವನದಿಯಾಗಿರುವ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಜೋಯಿಡಾ ತಾಲ್ಲೂಕಿನ ಗಣೇಶ ಗುಡಿಯ ಸೂಪಾ ಜಲಾಶಯ ಬಹುತೇಕ ಭರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ಅವರು ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ನಮ್ಮ ತಾಲೂಕಿನ ಹೆಮ್ಮೆಯ ಹಾಗೂ ನಾಡಿಗೆ ಬೆಳಕು ಕೊಡುವ ಸೂಪಾ ಜಲಾಶಯವು ಭರ್ತಿಯಾಗುತ್ತಿರುವುದು ಅತ್ಯಂತ ಸಂತಸದ ವಿಚಾರ. ಭಕ್ತಿಯಿಂದ ಬಾಗಿನವನ್ನು ಅರ್ಪಿಸಿದ್ದೇನೆ ಎಂದರು.