ಬೆಳೆ ಚೆನ್ನಾಗಿ ಬಂದ್ರೂ ಕಳಪೆ ಬೀಜ,ಕಿಟಬಾಧೆಗೆ ಕಾಳುಕಟ್ಟದ ಸೋಯಾಬಿನ್ ಮೊಬೈಲ್ ವಿಡಿಯೋ ಮಾಡಿ ವ್ಯವಸ್ಥೆ ವಿರುದ್ಧ ಇಂದು ಮಂಗಳವಾರ 9 ಗಂಟೆಗೆ ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದಲ್ಲಿ ದೊಡ್ಡನಾಯಕ್ ಶಿವನಾಯಕರ್ ಎನ್ನುವ ರೈತ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗುತ್ತಿದ್ದು ಎರಡು ಎಕರೆ ಪ್ರದೇಶದಲ್ಲಿ ಸೋಯಾಬಿನ್ ಬೆಳೆದಿದ್ದ ವೃದ್ಧ ರೈತ ಇದಕ್ಕೆ ಏನು ಮಾಡಬೇಕು ಅದನ್ನೆಲ್ಲ ಮಾಡಿ ಮುಗಿಸಿದ್ದೇನೆ ಗೊಬ್ಬರ ಹಾಕೋದು ಮುಗಿತು,ಎಣ್ಣೆ ಹೊಡೆಯೊದು ಮುಗಿತು ಹತ್ತು ಸಲ ಕೀಟನಾಶಕ ಎಣ್ಣೆ ಹೊಡೆಯೊದು ಮುಗಿತು. ಆದರೆ ಬೆಳೆಯಲಿ ಏನಿದೆ ನೋಡ್ರಿ ಎಂದು ರೈತನ ಅಳಲು ಇವರು ಎಂತಹ ಬೀಜ ಕೊಡ್ತಾರೋ, ಎಂತಹ ಗೊಬ್ಬರ ಕೊಡ್ತಾರೋ ಗೊತ್ತಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.