ಅಸ್ಸಾಂ ಮೂಲದ ವಿವಾಹಿತ ಮಹಿಳೆಯನ್ನು ಪಬ್ಜಿ ಆನ್ ಲೈನ್ ಗೇಮ್ ಮೂಲಕ ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ವಂಚಿಸಿ 12 ಲಕ್ಷ ವಂಚನೆ ಮಾಡಿದ ಬಗ್ಗೆ ದೂರು ದಾಖಲಾಗಿದೆ ಎಂದು ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ನ್ಯೂಟೌನ್ ನಿವಾಸಿಯಾದ ಮುಸ್ಲಿಂ ಸಮುದಾಯದ ಜಮೀರ್ ಎಂಬ 34 ವರ್ಷ ಯುವಕ ಆಸ್ಸಾಂ ಮೂಲದ ಹಿಂದು ವಿವಾಹಿತ ಮಹಿಳೆಯನ್ನು 2022 ರಿಂದ ಪಬ್ಜಿ ಆನ್ ಲೈನ್ ಗೇಮ್ ನಲ್ಲಿ ಪರಿಚಯ ಮಾಡಿಕೊಂಡು ತಾನು ಸೇಠ್ ಸಮುದಾಯಕ್ಕೆ ಸೇರಿದವನೇಂದು ತಿಳಿಸಿ ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿರುತ್ತಾನೆ ಎಂದರು