ಗುಬ್ಬಿ : ಸಹಕಾರಿ ಸಂಘ ಅಭಿವೃದ್ದಿಯಾಗಲು ಸದಸ್ಯರು ಹಾಗೂ ಆಡಳಿತ ಮಂಡಳಿ ಒಟ್ಟಾಗಿ ನಡೆದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂದು ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರಯ್ಯ ತಿಳಿಸಿದರು. ಗುಬ್ಬಿ ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನ ಭಾನುವಾರ ಮಧ್ಯಾಹ್ನ 12 ರ ಸಮಯದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಆರು ದಶಕಗಳಿಂದಲೂ ಸಂಘ ವು ಬಹಳ ವ್ಯವಸ್ಥಿತವಾಗಿ ನಡೆಯುತ್ತಿದ್ದು ಆಡಳಿತ ಮಂಡಳಿಯ ಉತ್ತಮ ಆಡಳಿತದಿಂದಾಗಿ ಸಂಘವು ಲಾಭದತ್ತ ಪ್ರತಿ ವರ್ಷವೂ ಮುಂದುವರೆಯುತ್ತಿದೆ ಎಂದರು.