ಬೈಕ್ ವ್ಹೀಲಿಂಗ್ ಮಾಡೋದು ತಪ್ಪು ಎಂದು ಗೊತ್ತಿದ್ದರೂ ಕೂಡ ಕೆಲ ಪುಂಡ ಯುವಕರು ಬುದ್ದಿ ಕಲಿತಂತೆ ಕಾಣಿಸುತ್ತಿಲ್ಲ.ಮತ್ತೆ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆ. ಕೋಲಾರದಲ್ಲಿ ಯುವಕರಿಬ್ಬರು ತಮ್ಮ ಬೈಕ್ ನಲ್ಲಿ ವ್ಹೀಲಿಂಗ್ ಮಾಡಿ ಮೊಂಡಾಟ ಮೆರೆದಿದ್ದಾರೆ.ರಾಷ್ಟೀಯ ಹೆದ್ದಾರಿ 75 ರಲ್ಲಿ ಈ ಯುವಕರು ವ್ಹೀಲಿಂಗ್ ಮಾಡಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ.ಜಿಲ್ಲೆಯ ನರಸಾಪುರ ಬೈಪಾಸ್ ಬಳಿ ಸ್ಕೂಟರ್ ನಲ್ಲಿ ವ್ಹೀಲಿಂಗ್ ಮಾಡಿದ ದೃಶ್ಯಾವಳಿಗಳು ಮೊಬೈಲ್ ನಲ್ಲಿ ಸೆರೆಯಾಗಿದೆ.ಅದೇ ದಾರಿಯಲ್ಲಿ ತೆರಳುವ ಬೈಕ್ ಸವಾರರೊಬ್ಬರು ಈ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಹಿಡಿದ್ದು ಶುಕ್ರವಾರ ಸಂ