ಶ್ರೀ ಗಣೇಶೋತ್ಸವ ಅಂಗವಾಗಿ ಅಳವಡಿಸಿದ್ದ ಫ್ಲೆಕ್ಸ್ ತೆರವಿಗೆ ಪೊಲೀಸರು ಮುಂದಾದ ಹಿನ್ನೆಲೆಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾದ ಘಟನೆ ದಾವಣಗೆರೆ ನಗರದ ಮಟ್ಟಿಕಲ್ಲು ಪ್ರದೇಶದಲ್ಲಿ ಗುರುವಾರ ರಾತ್ರಿ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ ನಗರದ ಮಟ್ಟಿಕಲ್ಲು ಪ್ರದೇಶದಲ್ಲಿ ವೀರ ಸಾವರ್ಕರ್ ಯುವಕರ ಸಂಘ ಶ್ರೀ ಗಣೇಶೋತ್ಸವ ಹಮ್ಮಿಕೊಂಡಿದ್ದು, ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಬದಿ ಅಳವಡಿಸಿದ್ದ ಒಂದು ಫ್ಲೆಕ್ಸ್ ಪ್ರಚೋದನಾಕಾರಿಯಾಗಿದೆ ಎಂಬುದಾಗಿ ಫ್ಲೆಕ್ಸ್ ಫೋಟೊ ತೆಗೆದು ಪೊಲೀಸ್ ಇಲಾಖೆಗೆ ಯಾರೋ ಕಳಿಸಿದ್ದರು.