ಧರ್ಮಸ್ಥಳ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು ವಿಜಯನಗರದಲ್ಲಿ ಮಾತನಾಡಿ, ಬಿಜೆಪಿ ಎಂದೂ ರಾಜಕೀಯ ಮಾಡಿದವರಲ್ಲ. ಧರ್ಮಸ್ಥಳಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಮ್ಮ ನಂಬಿಕೆಗೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ತಾವೇ ತೋಡಿದ ಗುಂಡಿಗೆ ಬೀಳುವ ಪರಿಸ್ಥಿತಿಗೆ ಬಂದಿದ್ದಾರೆ. ನಮ್ಮ ಧರ್ಮಕ್ಕೆ ಸಣ್ಣ ಅಪಚಾರ ನಡೆದರೂ ಕೆಲಸ ಮಾಡಬೇಕಿರುವುದು ನಮ್ಮಕರ್ತವ್ಯ. ಕಾಂಗ್ರೆಸ್ ನವರು ಸಾವಿರ ಭಾರಿ ಸುಳ್ಳು ಹೇಳಿ ಅರಗಿಸಿಕೊಳ್ಳಲು ಆಗುತ್ತಿಲ್ಲ, ಹಾಗಾಗಿಯೇ ಏನೇನೋ ಹೇಳುತ್ತಿದ್ದಾರೆ ಎಂದರು.