ಸುಳವಾಡಿ ವಿಷ ಪ್ರಾಶನ ಪ್ರಕರಣದ ಆರೋಪಿಯಾಗಿರುವ ಮಹದೇವಸ್ವಾಮಿಗೆ ಮತ್ತೊಂದು ಕಾನೂನು ಹಿನ್ನಡೆ ಎದುರಾಗಿದೆ. ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕೊಳ್ಳೇಗಾಲದ ಹಿರಿಯ ಸಿವಿಲ್ ನ್ಯಾಯಾಲಯ ವಜಾಗೊಳಿಸಿದೆ. ಸಾಲೂರು ಮಠದ ಹಿಂದಿನ ಪೀಠಾಧ್ಯಕ್ಷ ಗುರು ಸ್ವಾಮೀಜಿ ಅವರ ಅನಾರೋಗ್ಯದ ಸಂದರ್ಭದಲ್ಲೇಶಾಂತಮಲ್ಲಿಕಾರ್ಜುನಸ್ವಾಮಿಯನ್ನು ಪೀಠಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಆದರೆ, ಜೈಲಿನಲ್ಲಿ ಇದ್ದ ಮಹದೇವಸ್ವಾಮಿ, ಈ ನೇಮಕಾತಿಗೆ ತಡೆಯಾಜ್ಞೆ ನೀಡಬೇಕೆಂದು ಕೊಳ್ಳೇಗಾಲದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಕಿರಿಯ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದರೂ, ನ್ಯಾಯಾಲಯ ಈ ಮಠದಲ್ಲಿ ಸಹಜವಾಗಿ ನಡೆದುಕೊಂಡು ಬಂದ ನಿಯಮಾನುಸಾರವೇ ನೇಮಕಾರಿ ನೆಡೆದಿದೆಎಂದಿದೆ