ಭದ್ರಾ ಮೆಲ್ದಂಡೆ ಯೋಜನೆಯ ಕಾಮಗಾರಿಗೆ ರಾಜ್ಯ ಸರಕಾರ ಕೇಂದ್ರದ ಹಣಕ್ಕಾಗಿ ಕಾಯದೇ ಎಸ್ಸಿ ಎಸ್ಟಿ ಹಣ ಬಳಸಿ ಕಾಮಗಾರಿ ಪೂರ್ಣಗೊಳಿಸಿ ಅಂತಾ ಜಿಲ್ಲಾ ನೀರಾವರಿ ಹೋರಾಟ ಸಮೀತಿ ಆಗ್ರಹಿಸಿದೆ. ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ನೀರಾವರಿ ಹೋರಾಟ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಈಗಾಗಲೇ ಸರಕಾರ ಎಸ್ಸಿ ಎಸ್ಟಿ ಗಳಿಗಾಗಿ ಕುಡಿಯುವ ತುಂಗಭದ್ರಾ ಹಿನ್ನೀರಿಂದ ನೀರಿನ ಯೋಜನೆ ಎಸ್ಸಿ ಎಸ್ಟಿ ಫಂಡಲ್ಲಿ ಕಾಮಗಾರಿ ರೂಪಿಸಿದೆ. ಹಾಗೆಯೇ ಅಪ್ಪರ ಭದ್ರಾ ಯೋಜನೆಗೂ ಈ ಅನುದಾನ ನೀಡಬೇಕು. ರಾಜ್ಯ ಸರಕಾರ ಈ ಬಾರಿ ಬಜೆಟ್ ನಲ್ಲಿ ಅಪ್ಪರ್ ಭದ್ರಾಗೆ 2650 ಕೋಟಿ ಅನುದಾನ ಘೋಷಣೆ ಮಾಡಿದ್ದು, 6 ತಿಂಗಳಲ್ಲಿ ಬಳಸಿದ್ದು 180 ಕೋಟಿ ಮಾತ್ರ.