ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಿದ್ಧತೆಗಳ ಬಗ್ಗೆಸಮೀಕ್ಷೆ ಕೈಗೊಳ್ಳಲು ಜಿಲ್ಲಾಡಳಿತ ಅಗತ್ಯ ಪೂರ್ವ ಸಿದ್ಧತೆ ಕೈಗೊಂಡಿದೆ.ಸಮೀಕ್ಷೆಯ ಭಾಗವಾಗಿ ಜಿಲ್ಲೆಯ ಎಲ್ಲ ಕುಟುಂಬಗಳ ಮನೆಗಳಿಗೆ ಶೈಕ್ಷಣಿಕ ಸಮೀಕ್ಷಾ ಸ್ಟಿಕ್ಕರ್ ಅಂಟಿಸಬೇಕಾಗಿದೆ. ವಿದ್ಯುತ್ಮೀಟರ್‌ಗಳು ಇರುವ ಮನೆಗಳನ್ನು ಆಧರಿಸಿ ಕುಟುಂಬಗಳನ್ನು ಲೆಕ್ಕ ಹಾಕಲಾಗಿದೆ.ಪ್ರತಿ ಮನೆಗಳಿಗೆ ಮೀಟರ್ ರೀಡಿಂಗ್‌ಗೆ ತೆರಳುವ ಬೆಸ್ಕಾಂ ಸಿಬ್ಬಂದಿಯು ಈ ಸ್ಟಿಕ್ಕರ್‌ಗಳನ್ನು ಅಳವಡಿಸಬೇಕು. ಜಿಲ್ಲೆಯಲ್ಲಿಸುಮಾರು 3 ಲಕ್ಷ ಕುಟುಂಬಗಳ ಮನೆಗಳ ಮೇಲೆ ಸಿಕ್ಕರ್‌ಗಳನ್ನು ಅಂಟಿಸಬೇಕಿದೆ. ಆದರೆ ಇಲ್ಲಿಯವರೆಗೂ ಇದರಅರ್ಧದಷ್ಟೂ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲು ಸಾಧ್ಯವಾಗಿಲ್ಲ.