ಕೆಪಿಟಿಸಿಎಲ್ ಬೃಹತ್ ವಿದ್ಯುತ್ ಸ್ಥಾವರ ವಿರೋಧಿಸಿ ಶಿಕಾರಿಪುರ ಪಟ್ಟಣದಲ್ಲಿ ಸೋಮವಾರ ನೆಲವಾಗಿಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದ ಸರ್ವೇ ನಂಬರ್ 25ರ ಗೋಮಾಳದಲ್ಲಿ ಬೃಹತ್ ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೆಪಿಟಿಸಿಎಲ್ ಮುಂದಾಗಿದ್ದು, ಅದನ್ನ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ್ದಾರೆ.ಜನವಸತಿ ಪ್ರದೇಶವನ್ನ ಬಿಟ್ಟು ಸರ್ವೆ ನಂಬರ್ 147 ಹಾಗೂ 148ರಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿ ಎಂದು ಒತ್ತಾಯಿಸಿದರು.