ತಾಲೂಕಿನ ಇತಿಹಾಸ ಪ್ರಸಿದ್ಧ ಹಳ್ಳಿಖೇಡ(ಬಿ) ಸೀಮಿ ನಾಗನಾಥ ದೇವಸ್ಥಾನದಲ್ಲಿ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ನಾಗೇಶ್ವರ ಮಾಲಾಧಾರಿಗಳ ಇರಮುಡಿ ಸೇವೆಯ ಸಮಾರಂಭ ಸಮಾರಂಭ ಅಗಸ್ಟ್ 23 ರಂದು ಸಿಬಿ ನಗರದ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಪ್ರಧಾನ ಅರ್ಚಕ ಬಸವರಾಜ್ ಹಾಲಾ ತಿಳಿಸಿದರು. ಸಮಾರೋಪ ಸಮಾರಂಭ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 2:45 ಕ್ಕೆ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು.