ಸೆಪ್ಟಂಬರ್ 5, ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಸಂಡೂರು ತಾಲ್ಲೂಕಿನ ಶೆಲಿಯಪ್ಪನಹಳ್ಳಿ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ.ಮೆಕ್ಕೆಜೋಳದ ಜಮೀನನ್ನು ಕಾಯುತ್ತಿದ್ದ 45 ವರ್ಷದ ರೈತ ವೆಂಕಟೇಶ್ ಅವರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದೆ.ಮಾಹಿತಿ ಪ್ರಕಾರ, ಜಮೀನಿನಲ್ಲಿದ್ದ ಕಟ್ಟಿಗೆಯ ಗುಡಿಸಲು ಮನೆಗೆ ಏಣಿ ಹತ್ತುವಾಗ ಕೆಳಗಿದ್ದ ಕರಡಿ ಏಕಾಏಕಿ ಎರಗಿ, ರೈತನ ಮೇಲೆ ದಾಳಿ ಮಾಡಿದೆ. ಈ ವೇಳೆ ಕರಡಿ ತಲೆ, ಮುಖ, ಬೆನ್ನು, ಕೈ ಕಾಲುಗಳು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.ಗಾಯಗೊಂಡ ರೈತನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕರಡಿ ಅಟ್ಟಹಾಸದಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.