ಚಿತ್ರದುರ್ಗ ನಗರದಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಅಲ್ತಾಪ್ ಅಲಿಯಾಸ್ ಟೈಗರ್ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಬಸ್ ನಿಲ್ದಾಣ ಬಳಿ ಇದ್ದ ಎಟಿಎಂನಲ್ಲಿ ಹಣ ಕಳ್ಳತನಕ್ಕೆ ಆರೋಪಿ ಅಲ್ತಾಪ್ ಯತ್ನಿಸಿದ್ದ. ಆರೋಪಿ ಅಲ್ತಾಪ್ ನಗರದ ಹೊಸಪೇಟೆ ರಸ್ತೆಯ ನಿವಾಸಿ ಎಂದು ಕೂಡಾ ತಿಳಿದು ಬಂದಿದೆ. ನಗರ ಠಾಣೆ ಪಿಐ ಉಮೇಶ್ ಬಾಬು ನೇತೃತ್ವದಲ್ಲಿ ಆರೋಪಿಯನ್ನ ಬಂಧಿಸಲಾಗಿದ್ದು, ಆರೋಪಿ ಹಾರೆ ಹಿಡಿದು ಎಟಿಎಂ ದೋಚಲು ಯತ್ನಿಸಿದ್ದ ಸಿಸಿಟಿವಿ ದೃಶ್ಯ ಕೂಡಾ ವೈರಲ್ ಆಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡಾ ದಾಖಲಾಗಿದೆ.