ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಬೇಕೆಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಕಿವಿಮಾತು ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗ್ರಾಹಕ ಜಾಗೃತಿ ಮತ್ತು ಸೈಬರ್ ಹೈಜಿನ್ ಲೇಟೆಸ್ಟ್ ಡೆವಲಪ್‍ಮೆಂಟ್ ಕುರಿತ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿ, ಮೊಬೈಲ್ ಬಳಕೆದಾರರಲ್ಲಿ ವಿದ್ಯಾರ್ಥಿ ವರ್ಗವು ಪ್ರಮುಖವಾಗಿರುವ ಕಾರಣ ಸೈಬರ್ ಅಪರಾಧಗಳಿಂದ ದೂರ ಇರುವ ಮತ್ತು ತಂತ್ರಜ್ಞಾನದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು. ಸೈಬರ್ ಅಪರಾಧಗಳಿಗೆ ಎಲ್ಲಾ ಸಂದರ್ಭಗಳಲ್ಲೂ ದೂರು ಕೊಡುವುದು ಕಷ್ಟವಾಗುತ್ತದೆ. ನಾವು ಸೈಬರ್ ಕ್ರೈಂ ಮಾಡದಂತೆ ಮತ್ತು ಒಳಗಾಗದಂತೆ ಎಚ್ಚರ ವಹಿಸಿ ಎಂದರು.