ಹಾಸನ ನಗರದಲ್ಲಿ ದುಷ್ಕರ್ಮಿಗಳ ಆಟಹಾಸ ಮುಂದುವರೆದಿದೆ. ನಗರದ ಪೆನ್ಷನ್ ಮೊಹಲ್ಲ 14ನೇ ಕ್ರಾಸ್ ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು ಗಾಂಜಾ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕಿಡಿಗೇಡಿಯೊಬ್ಬ ಹೊಂಚು ಹಾಕಿ ದ್ವಿಚಕ್ರ ವಾಹನ ಸುಟ್ಟಿರುವ ವಿಡಿಯೋ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಹಿಡಿದಿದ್ದಾರೆ ನಗರದಲ್ಲಿ ಹೆಚ್ಚಾಗುತ್ತಿರುವ ಕಿಡಿಗೇಡಿಗಳ ಹಾವಳಿಗೆ ಕಡಿವಾಣ ಹಾಕಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ