ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ಬಳಿ ಪಾಟೀಲ ಎಂಬತಾ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೇ ಅನಧಿಕೃತವಾಗಿ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ವಿಜಯಪುರ ಹುಬ್ಬಳ್ಳಿ ಎನ್ ಎಚ್ 52 ರ ರಸ್ತೆಯ ಬಾಜು ಇರುವ ಪರ್ಲ್ ಧಾಬಾ ಬಳಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುವಾಗ ಪೊಲೀಸರು ದಾಳಿ ನಡೆಸಿ ಒಟ್ಟು 17,500 ಕ್ಕೂ ಅಧಿಕ ಮೌಲ್ಯದ ವಿವಿಧ ಮದ್ಯದ ಬಾಟಲಿ ವಶಕ್ಕೆ ಪಡೆಯಲಾಗಿದೆ ಎಂದು ಬಬಲೇಶ್ವರ ಠಾಣೆಯ ಪಿ ಎಸ್ ಐ ಕೊಟ್ಟ ದೂರಿನನ್ವಯ ಪ್ರಜರಣ ದಾಖಲಾಗಿದೆ